welcome
FLASH
Wednesday, 31 December 2014
Thursday, 25 December 2014
Tuesday, 23 December 2014
.jpg)
ಕೃಷಿಕರು ನಮ್ಮ ದೇಶದ ಬೆನ್ನೆಲುಬು .ದಿವಂಗತ ಪ್ರಧಾನಿ ಚೌಧರಿ ಚರಣ್ ಸಿಂಗ್ ರ ಜನ್ಮದಿನ ಡಿಸೆಂಬರ್ 23 ನ್ನು ದೇಶದಾದ್ಯಂತ ಕಿಸಾನ್ ದಿವಸ್ ಅಥವಾ ಫಾರ್ಮರ್ಸ್ ಡೇ ಎಂದು ಆಚರಿಸಲಾಗುತ್ತದೆ . ಉತ್ತರಪ್ರದೇಶದ ಕೃಷಿ ಕುಟುಂಬ ದಲ್ಲಿ ಜನ್ಮತಾಳಿ ಅತ್ಯಂತ ಸರಳಜೀವನವನ್ನು ನಡೆಸಿದ ಚರಣಸಿಂಘ ರದು ಆದರ್ಶ ಬದುಕು . ಈ ದೇಶದ ಮಣ್ಣಿನ ಮಗನಾಗಿ ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಜೀವನವನ್ನು ಉತ್ತಮಪಡಿಸುವುದಕ್ಕೆ ಪ್ರಯತ್ನಿಸಿದ ಮಾಜಿ ಪ್ರಧಾನಿಗೆ ನಮನಗಳು. ಹಾಗೂ ಕೃಷಿಕರ ಜೀವನ ಉತ್ತಮವಾಗಲಿ ದೇಶವು ಸಮೃದ್ಧಿ ಯತ್ತ ಸಾಗಲಿ ಎಂಬುದೇ ಈ ದಿನದ ಹಾರೈಕೆ .
Monday, 22 December 2014
.jpg)
Sunday, 21 December 2014
Thursday, 18 December 2014
Saturday, 13 December 2014
Tuesday, 9 December 2014
Saturday, 6 December 2014
ಬೊಳಿಪು ಜಾನಪದ ಕಲಾತಂಡ ಇವರಿಂದ ಕಾರ್ಯಕ್ರಮ
ನೆರೆದವರ ಮನಸ್ಸನ್ನು ಶತಮಾನಗಳ ಹಿಂದೆ ಕೊಂಡೊಯ್ದು,ಮರೆಯಾಗುತ್ತಿರುವ ಜನಪದ ಕಲೆಯ ವಿವಿಧ ಪ್ರಾಕಾರಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವುದೇ 'ಬೊಳಿಪು ' ಕಲಾತಂಡ ಮಾಡುತ್ತಿರುವ ಉತ್ತಮ ಕಲಾ ಸೇವೆ ಎಂಬುದರಲ್ಲಿ ಸಂಶಯವಿಲ್ಲ.
ತಂಡದ ಮುಖ್ಯಸ್ಥ ಶ್ರೀ ಶಂಕರ ಸ್ವಾಮಿ ಕೃಪ ಹಾಗೂ ಸದಸ್ಯರಾದ, ಯಶೋದ,ಅಶೋಕ,ಯಜ್ಞೇಶ್, ಯಜ್ನುಶ,ಸಂಧ್ಯಾ, ಶರಣ್ಯ,ಗೀತ ಸುಶೀಲ,ಶ್ವೇತ ಹಾಗೂ ಪ್ರಧಾನ ಕಲಾವಿದ ಮತ್ತು ಪತ್ರಕರ್ತ ಶ್ರೀ ಜಯ ಮಣಿಯoಪಾರೆ ಇವರ ಕಲಾ ಸೇವೆ ಅಭಿನಂದನಾರ್ಹ.
ನೆರೆದವರ ಮನಸ್ಸನ್ನು ಶತಮಾನಗಳ ಹಿಂದೆ ಕೊಂಡೊಯ್ದು,ಮರೆಯಾಗುತ್ತಿರುವ ಜನಪದ ಕಲೆಯ ವಿವಿಧ ಪ್ರಾಕಾರಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವುದೇ 'ಬೊಳಿಪು ' ಕಲಾತಂಡ ಮಾಡುತ್ತಿರುವ ಉತ್ತಮ ಕಲಾ ಸೇವೆ ಎಂಬುದರಲ್ಲಿ ಸಂಶಯವಿಲ್ಲ.
ತಂಡದ ಮುಖ್ಯಸ್ಥ ಶ್ರೀ ಶಂಕರ ಸ್ವಾಮಿ ಕೃಪ ಹಾಗೂ ಸದಸ್ಯರಾದ, ಯಶೋದ,ಅಶೋಕ,ಯಜ್ಞೇಶ್, ಯಜ್ನುಶ,ಸಂಧ್ಯಾ, ಶರಣ್ಯ,ಗೀತ ಸುಶೀಲ,ಶ್ವೇತ ಹಾಗೂ ಪ್ರಧಾನ ಕಲಾವಿದ ಮತ್ತು ಪತ್ರಕರ್ತ ಶ್ರೀ ಜಯ ಮಣಿಯoಪಾರೆ ಇವರ ಕಲಾ ಸೇವೆ ಅಭಿನಂದನಾರ್ಹ.
ದಿನಾಂಕ 06-12-2014 ಶನಿವಾರ ಶಾಲೆಯಲ್ಲಿ ಮರೆಯಾಗುತ್ತಿರುವ ಕೆಲವು ಕಲೆಗಳನ್ನು ನೆನಪಿಸುವ ಹಾಗೂ ಮಕ್ಕಳನ್ನುಇದರೊಂದಿಗೆ ತೊಡಗಿಸಿಕೊಂಡ ರಂಜನೀಯಕಾರ್ಯಕ್ರಮವನ್ನು ಶಾಲೆಯಲ್ಲಿ ಬೊಳಿಪು ತಂಡದ ಕಲಾವಿದರು ನಡೆಸಿಕೊಟ್ಟರು.ಶಾಲಾ ಮ್ಯಾನೇಜರ್ ಶ್ರೀ ಕೃಷ್ಣ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯೋಪಾದ್ಯಾಯ ಶ್ರೀಪತಿ ಭಟ್ ಹಾಗೂ ಶಂಕರ ಸ್ವಾಮಿ ಕೃಪ ಕಾರ್ಯಕ್ರಮದ ಬಗ್ಗೆ ಮನದಾಳದ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಪ್ರಾಚೀನ ಸಂಗೀತ ವಾದ್ಯಗಳಾದ ದುಡಿ, ಚೆಂಡೆ ಡೋಲು, ತಮ್ಕಿ , ಗೆಜ್ಜೆಕೋಲು ,ಪರುಕೋಲು ,ಬಿದಿರಚೆಂಡೆ ಮುಂತಾದವುಗಳನ್ನು ಪರಿಚಯಿಸಲಾಯಿತು . ಬೈರಿಹಾಡು, ಓ ಬೇಲೆ ಹಾಡು, ಒಡ್ಡು ಕುಣಿತ, ಹಾಗೂ ಚೆನ್ನು ಕುಣಿತದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮ ಮಕ್ಕಳ ಹಾಗೂ ಎಲ್ಲರ ಮನಸ್ಸನ್ನು ರಂಜಿಸುವಲ್ಲಿ ಯಶಸ್ವಿಯಾಯಿತು..jpg)
.jpg)
Wednesday, 3 December 2014
ವಿಶ್ವ ವಿಕಲಾಂಗ ದಿನ -2014 ರ ಅಂಗವಾಗಿ ಮಕ್ಕಳಲ್ಲಿ ತಿಳುವಳಿಕೆ ಯನ್ನು ಮೂಡಿಸುವ ಉದ್ದೇಶದಿಂದ ದಿನದ ಮಹತ್ವವನ್ನು ತಿಳಿಸುವುದರೊಂದಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿವಿಧ ತಂಡಗಳಲ್ಲಿ ಅಂಗವೈಕಲ್ಯಗಳನ್ನು ಹೊಂದಿದ ಮಕ್ಕಳ ಮನೆಗೆ ಸೌಹಾರ್ಧ ಭೇಟಿಯಿತ್ತು, ಮಗು ಹಾಗೂ ಹೆತ್ತವರೊಂದಿಗೆ ವಿಶೇಷ ಮಾತುಕತೆ ನಡೆಸಿದರು,ಅವರ ಸ್ಥಿತಿ ಗತಿಗಳನ್ನು ತಿಳಿಯುವುದರೊಂದಿಗೆ ಸಿಹಿ ಕಹಿಗಳನ್ನು ಹಂಚಿಕೊಂಡು ಸಮಾಧಾನದ ಮಾತುಗಳನ್ನಾಡಿದರು.
![]() |
School team with Harshitha & Shrikanth the disable children |
Sunday, 30 November 2014
1793 ರಲ್ಲಿ ಮೊತ್ತ ಮೊದಲಬಾರಿ ಬ್ರಿಟೀಷ ರೆದುರು ಸೆಟೆದುನಿಂತು ಸಮರವನ್ನು ಸಾರಿದ ಕೆಚ್ಚೆದೆಯ ವೀರ ಕೆರಳೀಯ
'ಪಳಶೀರಾಜ' .'ವೀರ ಕೇರಳ ಸಿಂಹ' ಎಂಬುದು ಬ್ರಿಟೀಷರ ವಿರುದ್ದ ನಡೆಸಿದ ಯುದ್ದಗಳ ಪರಿಣಾಮವಾಗಿ ಲಭಿಸಿದ ಬಿರುದು . ನಮ್ಮ ಸ್ವಾತಂತ್ರ್ಯ ಚಳವಳಿ ಯ ಇತಿಹಾಸದಲ್ಲಿ ಅಮರನಾದ ಕೊಟ್ಟಾಯಂ ನ ವೀರ. ಬಾಲ್ಯ ಕಾಲದಲ್ಲಿಯೇ ಬ್ರಿಟೀಷರ ದಾಳಿಯಿಂದ ತನ್ನಸ್ವಂತ ರಾಜ್ಯವನ್ನು ವೈರಿಗಳಿಂದ ರಕ್ಷಿಸುವ ಪ್ರತಿಜ್ಞೆ ಯನ್ನು ಇಷ್ಟ ದೇವತೆ ಯಾದ 'ಭಗವತಿಯ ' ಮುಂದೆ ಮಾಡಿ ತನ್ನ ಕೊನೆಯ ಉಸಿರಿರುವ ತನಕ ರಾಜ್ಯಕ್ಕಾಗಿ ಬ್ರಿಟಿಷರ ಆಕ್ರಮಣದೆದುರು ಹೋರಾಡಿ ನವೆಂಬರ್ 30 ,1805 ರಂದು ವೀರ ಮರಣವನ್ನೈದ ಕೆಚ್ಚೆ ದೆಯ ಹೋರಾಟಗಾರ ಕೇರಳದ ಸಿಂಹ 'ಪಳಶೀರಾಜ'ನಿಗೆ ಪ್ರಣಾಮಗಳು .
![]() |
ಪಳಶೀರಾಜ |
Monday, 24 November 2014
Life is a dream—realize it. Life
is a scarifies-- offer it. Life is a love---enjoy it.''These are the words of Sri Sathya Sai Baba the greatest spiritual and the Social reformer of our country.
On the eve of
his 89th birthday of Sri Sathya Sai Seva Samithi of Katukukke
village distributed sweets to the school children remembering the great soul.Shri, Sachidananda Khanderi distributing sweets to school children
on 89th birthday of Sathya Sai baba.
Wednesday, 19 November 2014

Indira Gandhi was one of the most charismatic leaders of
modern India whose ideas and activities touched different
spheres of India's public life and politics and left an imprint
on world affairs, especially, the Non-alignment Movement.
She was the Prime Minister for over fifteen-and-half years.
Indira Gandhi strengthened the democratic structure and
tradition of India. She had tremendous influence on the
masses. She was the champion of the National Integration
and took a lot of initiatives for promoting National Integration. As a mark of respect to the departed leader and for the initiative she had
taken for National Integration, every year her birthday is observed as National Integration Day in our country on November 19 .
Sunday, 16 November 2014
Friday, 14 November 2014
ನೆಹರುವಿಗಿದೋ.... ನಮನಗಳು ..

. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ 1929 ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾದರು . ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸ ದಲ್ಲಿ ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಾಲಕಳೆದರು ಕಳೆದರು.ಕ್ವಿಟ್ ಇಂಡಿಯ ಆಂದೋಲನದಲ್ಲಿ 1937-1947'ಭಾರತವನ್ನು ಬಿಟ್ಟು ತೊಲಗಿ' (Quit India Movement) ಭಾಗವಹಿಸಿ1942ರಲ್ಲಿ 32 ತಿಂಗಳು ಕಾರಾಗೃಹವಾಸ ಅನುಭವಿಸಿದ ಇವರು,1947 ಭಾರತದ ಮೊದಲ ಸರಕಾರವನ್ನುರಚಿಸಿದರು .
ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ 1947-1964
ನೆಹರೂರವರು 18 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು 1964ರ ಮೇ27 ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು ಆಗಸ್ಟ್ 14 ರ ಮಧ್ಯರಾತ್ರಿ, ಸಂಸತ್ತನ್ನುದ್ದೇಶಿಸಿ ಮಾಡಿದಭಾಷಣ " ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳತೆಲ್ಲಾ ವನ್ನು ಮರೆತು ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಪವಿತ್ರ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆ ಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆಅತ್ಯಂತ ಮಹತ್ವವೆನಿಸುತ್ತದೆ ."
ಜವಾಹರಲಾಲ್ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
-
- ಕಾನು ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
- ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳ ಬೇಕಿದೆ.
- ಮೈಲುಗಟ್ಟಲೇ ಕ್ರಮಿಸಬೇಕಿದೆ, ಮೈಲುಗಟ್ಟಲೇ ಕ್ರಮಿಸಬೇಕಿದೆ.
ಬಿ .ಎ .ಯು .ಪಿ ಶಾಲೆ . ಕಾಟುಕುಕ್ಕೆ , ರಕ್ಷಕರ ಸಮ್ಮೇಳನ
ನವೆಂಬರ್ 14 ನೆಹರು ರವರ ಜನ್ಮದಿನ .ಇವರ ಸ್ಮರಣೆ ಯೊಂದಿಗೆ ಅಪರಾಹ್ನ 2 ರಿಂದ ಶಾಲೆಯಲ್ಲಿ ರಕ್ಷಕರ ಸಮ್ಮೇಳನವನ್ನು ನಡೆಸಲಾಯಿತು .ಶಾಲಾ MPTA ಅಧ್ಯಕ್ಷೆ ಶ್ರೀಮತಿ ಸವಿತಾ ಮುಗೇರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ವನ್ನು ಆರಂಭಿಸಲಾಯಿತು .ಮಕ್ಕಳ ಹೆತ್ತವರ ಹಾಜರಾತಿಯೂ ಉತ್ತಮವಾಗಿತ್ತು .ಸ್ವಚ್ಛ ವಿದ್ಯಾಲಯ , ಗುಣಮಟ್ಟದ ವಿದ್ಯಾಲಯ ಮುಂತಾದ ಆಶಯಗಳು ,ಮೌಲ್ಯಗಳನ್ನು ಮತ್ತು ಮನೋಭಾವಗಳನ್ನು ಬೆಳೆಸುವಲ್ಲಿ ಹೆತ್ತವರ ಪಾತ್ರದ ಬಗ್ಗೆ ತರಬೇತುದಾರ ಅಧ್ಯಾಪಕ ಗಣೇಶಕುಮಾರ್ ಇವರು ಸಭೆಯಲ್ಲಿ ವಿವರಣಾತ್ಮಕಭೋಧನೆಯನ್ನು ನೀಡಿದರು. ಮುಖ್ಯೋ ಪಾಧ್ಯಾಯ ಶ್ರೀಪತಿ ಭಟ್ ಇವರು ಉಪಸ್ಥಿತರಿದ್ದು ಶಾಲೆಯ ಮುಂದಿನ ಯೋಜನೆಗಳ ಸ್ಥೂಲ ಚಿತ್ರಣದ ಮಾಹಿತಿಯನ್ನು ನೀಡಿದರು. ಹೆತ್ತವರ ಪ್ರತಿಕ್ರಿಯೆಯು ಉತ್ತಮವಾಗಿತ್ತು . ಉಪಸ್ತಿತರೆಲ್ಲರಿಗೂ ಲಘೂಪಹಾರದ ವ್ಯವಸ್ಥೆ ಮಾಡಲಾಗಿತ್ತು
ನವೆಂಬರ್ 14 ನೆಹರು ರವರ ಜನ್ಮದಿನ .ಇವರ ಸ್ಮರಣೆ ಯೊಂದಿಗೆ ಅಪರಾಹ್ನ 2 ರಿಂದ ಶಾಲೆಯಲ್ಲಿ ರಕ್ಷಕರ ಸಮ್ಮೇಳನವನ್ನು ನಡೆಸಲಾಯಿತು .ಶಾಲಾ MPTA ಅಧ್ಯಕ್ಷೆ ಶ್ರೀಮತಿ ಸವಿತಾ ಮುಗೇರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ವನ್ನು ಆರಂಭಿಸಲಾಯಿತು .ಮಕ್ಕಳ ಹೆತ್ತವರ ಹಾಜರಾತಿಯೂ ಉತ್ತಮವಾಗಿತ್ತು .ಸ್ವಚ್ಛ ವಿದ್ಯಾಲಯ , ಗುಣಮಟ್ಟದ ವಿದ್ಯಾಲಯ ಮುಂತಾದ ಆಶಯಗಳು ,ಮೌಲ್ಯಗಳನ್ನು ಮತ್ತು ಮನೋಭಾವಗಳನ್ನು ಬೆಳೆಸುವಲ್ಲಿ ಹೆತ್ತವರ ಪಾತ್ರದ ಬಗ್ಗೆ ತರಬೇತುದಾರ ಅಧ್ಯಾಪಕ ಗಣೇಶಕುಮಾರ್ ಇವರು ಸಭೆಯಲ್ಲಿ ವಿವರಣಾತ್ಮಕಭೋಧನೆಯನ್ನು ನೀಡಿದರು. ಮುಖ್ಯೋ ಪಾಧ್ಯಾಯ ಶ್ರೀಪತಿ ಭಟ್ ಇವರು ಉಪಸ್ಥಿತರಿದ್ದು ಶಾಲೆಯ ಮುಂದಿನ ಯೋಜನೆಗಳ ಸ್ಥೂಲ ಚಿತ್ರಣದ ಮಾಹಿತಿಯನ್ನು ನೀಡಿದರು. ಹೆತ್ತವರ ಪ್ರತಿಕ್ರಿಯೆಯು ಉತ್ತಮವಾಗಿತ್ತು . ಉಪಸ್ತಿತರೆಲ್ಲರಿಗೂ ಲಘೂಪಹಾರದ ವ್ಯವಸ್ಥೆ ಮಾಡಲಾಗಿತ್ತು
Wednesday, 12 November 2014
ಡಾ. ಸಲೀಂ ಅಲಿ (ನವೆಂಬರ್ 12, 1896 - ಜುಲೈ 27, 1987) ಇವರು ಭಾರತದ ಪ್ರಸಿದ್ಧ ಪರಿಸರ ವಿಜ್ಞಾನಿ ಮತ್ತು ನಿಸರ್ಗವಾದಿಯಾಗಿದ್ದರು. ಇವರ ಪೂರ್ಣ ಹೆಸರು ಸಲೀಂ ಮೊಯುಜುದ್ದೀನ್ ಅಬ್ದುಲ್ ಅಲಿ. ಇವರನ್ನು ಭಾರತದ ಪಕ್ಷಿಯ ಮನುಷ್ಯ (ಬರ್ಡ್ ಮ್ಯಾನ್ ಆಫ್ ಇಂಡಿಯಾ) ಎಂದು ಕರೆಯಲ್ಪಡುತ್ತಿದ್ದರು. ಇವರು ಮೊತ್ತ ಮೊದಲ ಬಾರಿಗೆ ವೈಜ್ಞಾನಿಕ ರೀತಿಯಲ್ಲಿ ಪಕ್ಷಿಗಳ ಅಭ್ಯಾಸದ ಬಗ್ಗೆ ಗಮನ ಹರಿಸಿದರು. ಇವರ ಜನ್ಮ ದಿನವಾದ ನವೆಂಬರ್ 12ರಂದು ದೇಶದಾದ್ಯಂತ ಪಕ್ಷಿ ವೀಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ.
ಪಕ್ಷಿ ವೀಕ್ಷಣೆ ಮಾಡುತ್ತಿರುವ ನಮ್ಮ ಶಾಲಾ ಮಕ್ಕಳು
ಪಕ್ಷಿ ವೀಕ್ಷಣೆ ಮಾಡುತ್ತಿರುವ ನಮ್ಮ ಶಾಲಾ ಮಕ್ಕಳು
![]() |
Monday, 10 November 2014
ಮೌಲಾನಾ ಅಬ್ದುಲ್ ಕಲಾಂ ಅಜಾದ್
ಮೌಲಾನ ಅಬ್ದುಲ್ ಕಲಾಂ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ 11ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ. |
---|
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ ಪ್ರಮುಖರಲ್ಲಿ ಮೌಲಾನಾ ಅಬ್ಬುಲ್ ಕಲಾಂ ಒಬ್ಬರು. ಅವರು ಜನಿಸಿದ್ದು ನವೆಂಬರ್ 11, 1888ರಲ್ಲಿ.ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ ‘ಆಜಾದ್’ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ದರು.
ಪತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು. ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿದ್ದ ಆಜಾದರು ಮಹಾತ್ಮ ಗಾಂಧೀಜಿಯವರ ನಿಕಟವರ್ತಿಗಳಾದರು. ಮಹಾತ್ಮರು ಆಯೋಜಿಸಿದ್ದ ಅಸಹಕಾರ ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ ಯುವಕ ಎಂದು ಹೆಸರಾದರು. ಗಾಂಧೀಜಿಯವರ ‘ಸ್ವದೇಶಿ’, ‘ಸ್ವರಾಜ್’ ಚಿಂತನೆಗಳಿಗೆ ಮಾರು ಹೋಗಿ ಅವರ ಜೊತೆ ನಿರಂತರವಾಗಿದ್ದ ಅಬ್ದುಲ್ ಕಲಾಂ 1923ರ ವರ್ಷದಲ್ಲಿ ತಮ್ಮ 35ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರು ವಯಸ್ಸಿನವರಾಗಿದ್ದರು.
1931ರ ವರ್ಷದಲ್ಲಿ ‘ದರ್ಶನ ಸತ್ಯಾಗ್ರಹ’ದ ಪ್ರಮುಖ ಆಯೋಜಕರಾಗಿದ್ದ ಮೌಲಾನ ಹಲವಾರು ಕಠಿಣ ಸೆರೆವಾಸಗಳನ್ನು ಕಂಡರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ಸತತವಾಗಿ ಸೆರೆಯಲ್ಲಿಯೇ ಇದ್ದರು. ಸ್ವಾತಂತ್ರ್ಯದ ಸಮಯದಲ್ಲಿ ದೇಶದ ವಿಭಜನೆಯ ಕೂಗನ್ನು ಬೆಂಬಲಿಸದಿದ್ದ ಅವರು ಭಾರತದ ಪರವಾಗಿಯೇ ಇದ್ದರು. ಸ್ವತಂತ್ರ ಭಾರತದಲ್ಲಿ ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಅವರು ಹುಟ್ಟಿದ ಈ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಣೆಗೆ ತರಲಾಗಿದೆ.ಮೌಲಾನಾ ಅಬ್ದುಲ್ ಕಲಾಂ ಅವರು ಫೆಬ್ರವರಿ 22, 1958ರಲ್ಲಿ ನಿಧನರಾದರು.
Friday, 7 November 2014
- 'ಡಾ.ಸರ್.ಸಿ.ವಿ.ರಾಮನ್',ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ,'ಚಂದ್ರಶೇಖರ ವೆಂಕಟರಾಮನ್ ರವರು, ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ.ಈ ಪ್ರಶಸ್ತಿಯನ್ನು1930 ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು
- 1907ರಲ್ಲಿ 'ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾಗಿ 'ಕಲ್ಕತ್ತೆ'ಯಲ್ಲಿ 'ಡೆಪ್ಯುಟಿ ಅಕೌಂಟೆಂಟ್ ಜನರಲ್' ಆಗಿ ವೃತ್ತಿ-ಜೀವನ ಆರಂಭಿಸಿದರು, ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು.
- 1917ರಲ್ಲಿ 'ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯ'ರಾದರು.
- 1924ರಲ್ಲಿ 'ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ'ಗೆ ರಾಮನ್ ಆಯ್ಕೆಯಾದರು.
- ಮಾರ್ಚ್ 16 1928ರಲ್ಲಿ ತಮ್ಮಸಂಶೋಧನೆ, 'ರಾಮನ್ ಎಫೆಕ್ಟ್'ನ್ನು 'ಬೆಂಗಳೂರಿ'ನಲ್ಲಿ ಬಹಿರಂಗ ಪಡಿಸಿದ ರಾಮನ್, 1930ರಲ್ಲಿ ಅದಕ್ಕಾಗಿ 'ನೋಬೆಲ್ ಪ್ರಶಸ್ತಿ'ಗಳಿಸಿದರು.

ಗೌರವ, ಪ್ರಶಸ್ತಿಗಳು
- 'ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ' (1924)
- 'ನೈಟ್ ಹುಡ್ ಪ್ರಶಸ್ತಿ' (1929)
- 'ನೋಬೆಲ್ ಪ್ರಶಸ್ತಿ (1930)
- 'ಮೈಸೂರು ಮಹಾರಾಜ' ರಿಂದ, 'ರಾಜ ಸಭಾ ಭೂಷಣ ಗೌರವ' (1935
- 'ಭಾರತ ರತ್ನ ಪ್ರಶಸ್ತಿ (1954)
- ನವೆಂಬರ್ 21 1970ರಲ್ಲಿ, 'ಪ್ರೊ.ರಾಮನ್' ರವರು, ಬೆಂಗಳೂರಿನಲ್ಲಿ ನಿಧನರಾದರು.
Saturday, 1 November 2014
ಕಲಿಕೆಗೆ ತರಗತಿಯ ಹೊರತಾದ ವಾತಾವರಣವನ್ನು ಸೃಸ್ಟಿಸುವ ಉದ್ದೇಶದಿಂದ ಸಾಕ್ಷರ ಮಕ್ಕಳಿಗಾಗಿ ನವೋಲ್ಲಾಸ ಬಯಲು ಪ್ರವಾಸ ವನ್ನು ದಿನಾಂಕ 01 -11 -2014 ಶನಿವಾರ ದಂದು ಹಮ್ಮಿಕೊಳ್ಳಲಾಗಿತ್ತು .ಮಕ್ಕಳು ಆಸಕ್ತಿಯಿಂದ ಭಾಗವಹಿಸಿದ ಕಾರ್ಯಕ್ರಮ ಊರಿನ ಪ್ರಸಿದ್ದ ಕಲಾವಿದ ಜಿ .ಕೆ ಭಟ್, ಪೂವಾಳೆ,ಇವರ ಮನೆ 'ಕಲಾಕುಟೀರ'ದಿಂದಆರಂಭವಾಯಿತು.ಕಲಾಕೃತಿಗಳ ವೀಕ್ಷಣೆಯ ಬಳಿಕ ಮುಗೇರು ಭಾಸ್ಕರ ನಾಯಕ್ ರವರ ಗೋಶಾಲೆಯನ್ನು ಸಂದರ್ಶಿಸಿ ಮಾಹಿತಿ ಪಡೆದುಕ್ಕೊಳ್ಳಲಾಯಿತು .
ಮುಂದುವರಿದ ಪ್ರಯಾಣ ಊರಿನ ನದಿಯತ್ತ ಸಾಗಿತು.ನದಿಯಲ್ಲಿ ಸಂತೋಷದಿಂದ ಜಳಕವಾಡಿದಮಕ್ಕಳು ಕಲಿಕೆ ಹಾಗೂ ಪ್ರಕೃತಿಯ ಸಂಬಂಧವನ್ನು ಅಧ್ಯಾಪಕರಿಗೆ ನನಪಿಸುವಂತಿತ್ತು .ಹಸಿವೆ ಬಾಯಾರಿಕೆಗಳ ಪರಿವೆಯೇ ಇಲ್ಲದೆ ಮಕ್ಕಳು ಪ್ರಕೃತಿಯ ಮಡಿಲಲ್ಲಿ ಕುಣಿದು ಕುಪ್ಪಳಿಸಿದರು .ಕೊನೆಗೂ ಪ್ರಕೃತಿಯ ಮಡಿಲಲ್ಲಿ ಉಪಾಹಾರ ವನ್ನು ಸ್ವೀಕರಿಸಿದ ಬಳಿಕ ಯಾತ್ರೆಗೆ ಮಂಗಳ ವನ್ನುಹಾಡಲಾಯಿತು .
ಮುಂದುವರಿದ ಪ್ರಯಾಣ ಊರಿನ ನದಿಯತ್ತ ಸಾಗಿತು.ನದಿಯಲ್ಲಿ ಸಂತೋಷದಿಂದ ಜಳಕವಾಡಿದಮಕ್ಕಳು ಕಲಿಕೆ ಹಾಗೂ ಪ್ರಕೃತಿಯ ಸಂಬಂಧವನ್ನು ಅಧ್ಯಾಪಕರಿಗೆ ನನಪಿಸುವಂತಿತ್ತು .ಹಸಿವೆ ಬಾಯಾರಿಕೆಗಳ ಪರಿವೆಯೇ ಇಲ್ಲದೆ ಮಕ್ಕಳು ಪ್ರಕೃತಿಯ ಮಡಿಲಲ್ಲಿ ಕುಣಿದು ಕುಪ್ಪಳಿಸಿದರು .ಕೊನೆಗೂ ಪ್ರಕೃತಿಯ ಮಡಿಲಲ್ಲಿ ಉಪಾಹಾರ ವನ್ನು ಸ್ವೀಕರಿಸಿದ ಬಳಿಕ ಯಾತ್ರೆಗೆ ಮಂಗಳ ವನ್ನುಹಾಡಲಾಯಿತು .
Friday, 31 October 2014
A function to express happiness for receiving the best blog award for U.P section in Kumbla Sub-district was arranged in the school on 31-10-14 .Enmakaje Grama Pachayath education standing committee chairman BS Gambhir, PTA President Lokanath shetty, School Manager K.Krishna Bhat expressed happiness for the occasion Headmaster Shripathi Bhat spoke few words about the blog
Mr B S Gambhir in the presence of parents, teachers and students handed over the prize to Gopala krishna Bhat,the school teacher . The function was arranged by the students.
Mr B S Gambhir in the presence of parents, teachers and students handed over the prize to Gopala krishna Bhat,the school teacher . The function was arranged by the students.
Thursday, 30 October 2014
![]() |
Died: December 15, 1950
Achievements: Successfully led Kheda Satyagraha and Bardoli revolt against British government; elected Ahmedabad's municipal president in 1922, 1924 and 1927; elected Congress President in 1931; was independent India's first Deputy Prime Minister and Home Minister; played a key role in political integration of India; conferred Bharat Ratna in 1991. Sardar Patel was popularly known as Iron Man of India. His full name was Vallabhbhai Patel. He played a leading role in the Indian freedom struggle and became the first Deputy Prime Minister and Home Minister of India. He is credited with achieving political integration of India.
Tuesday, 21 October 2014
ದೀಪಾವಳಿ ಆಚರಣೆಯ ಮಹತ್ವ
ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:
- ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
- ಅಮಾವಾಸ್ಯೆಯ ಹಿಂದಿನ ದಿನ (ಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ
- .ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
- ದೀಪಾವಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತುರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
- ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರು ದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದ
- ತಮಸೋಮಾ ಜ್ಯೋತಿರ್ಗಮಯ . ಚಿಣ್ಣರ ಮನದ ದೀಪ ಪ್ರಜ್ವಲಿಸಲಿ.
Thursday, 16 October 2014
The 2014 Theme is:Family Farming: Feeding the World, Caring for the Earth

Saturday, 11 October 2014

Thursday, 9 October 2014
ಕಾರ೦ತರಿಗೊ೦ದು ನಮನ..ಜನ್ಮದಿನ 10-10-1907

Sunday, 5 October 2014

ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು
ತಮ್ಮಮಗನಾದ ಇಸ್ಮಾಯಿಲ್‌ರನ್ನುಸೃಷ್ಟಿಕರ್ತ ಅಲ್ಲಾಹನಿಗೆಬಲಿ ಕೊಡಲುಮುಂದಾದ ದಿನವನ್ನು ಈದ್ಉಲ್ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ಈ ಹಬ್ಬದ ದಿವಸ ಮುಸ್ಲಿಮರು ರ೦ಜಾನ್ ಹಬ್ಬದ ಹಾಗೆಯೇ ಪ್ರಾರ್ಥನೆ ಇತ್ಯಾದಿಗಳನ್ನು ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಹಬ್ಬಗಳ ಆಚರಣೆಯಲ್ಲಿ ಒ೦ದು ಬಗೆಯ ವೈಶಿಷ್ಟ್ಯವಿದೆ. ಅವು ಆ ಜನರಲ್ಲಿ ಒ೦ದು ಬಗೆಯ ಚೈತನ್ಯವನ್ನೂ, ಸೋದರ ಭಾವನೆಯನ್ನೂ ಉ೦ಟು ಮಾಡುತ್ತದೆ. ನಮಾಜ್ ನ೦ತರ ಒಬ್ಬರನೊಬ್ಬರು ಆಲಿ೦ಗನ ಮಾಡಿಕೊಳ್ಳುವುದು, ಕೈ ಕುಲುಕುವುದು, "ಈದ್ ಮುಬಾರಕ್" ಅ೦ದರೆ "ಈ ಹಬ್ಬ ನಿಮಗೆ ಶುಭವನ್ನು೦ಟು ಮಾಡಲಿ" ಎನ್ನುವುದು ಗಮನಾರ್ಹ.ಈ ಹಬ್ಬಗಳಲ್ಲಿ ಎಲ್ಲರಿಗೂ ಎಲ್ಲಾ ಮನೆಗಳಲ್ಲೂ ಆಮ೦ತ್ರಣ. ಸ್ವಲ್ಪವಾದರೂ ತಿನ್ನಲೇಬೇಕು. ಉಕ್ಕಿ ಬರುವ ಆನ೦ದವನ್ನು ಎಲ್ಲರೂ ಹ೦ಚಿಕೊಳ್ಳಬೇಕು.ಹಬ್ಬದ ದಿನ ಆನ೦ದ ಪಡೆಯದವನು ಅಭಾಗ್ಯನೆ೦ದು ಹೇಳಿಕೊಳ್ಳುವುದು ಮುಸ್ಲಿಮರ ಒ೦ದು ವಾಡಿಕೆ.
Subscribe to:
Posts (Atom)