Saturday 6 December 2014

                                      ಬೊಳಿಪು ಜಾನಪದ  ಕಲಾತಂಡ ಇವರಿಂದ  ಕಾರ್ಯಕ್ರಮ
ನೆರೆದವರ ಮನಸ್ಸನ್ನು  ಶತಮಾನಗಳ ಹಿಂದೆ ಕೊಂಡೊಯ್ದು,ಮರೆಯಾಗುತ್ತಿರುವ ಜನಪದ ಕಲೆಯ ವಿವಿಧ ಪ್ರಾಕಾರಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವುದೇ 'ಬೊಳಿಪು ' ಕಲಾತಂಡ ಮಾಡುತ್ತಿರುವ ಉತ್ತಮ ಕಲಾ ಸೇವೆ   ಎಂಬುದರಲ್ಲಿ ಸಂಶಯವಿಲ್ಲ. 
   ತಂಡದ ಮುಖ್ಯಸ್ಥ  ಶ್ರೀ ಶಂಕರ ಸ್ವಾಮಿ ಕೃಪ ಹಾಗೂ ಸದಸ್ಯರಾದ, ಯಶೋದ,ಅಶೋಕ,ಯಜ್ಞೇಶ್, ಯಜ್ನುಶ,ಸಂಧ್ಯಾ, ಶರಣ್ಯ,ಗೀತ ಸುಶೀಲ,ಶ್ವೇತ ಹಾಗೂ ಪ್ರಧಾನ ಕಲಾವಿದ ಮತ್ತು ಪತ್ರಕರ್ತ ಶ್ರೀ ಜಯ ಮಣಿಯoಪಾರೆ ಇವರ ಕಲಾ ಸೇವೆ ಅಭಿನಂದನಾರ್ಹ.
   ದಿನಾಂಕ  06-12-2014  ಶನಿವಾರ ಶಾಲೆಯಲ್ಲಿ ಮರೆಯಾಗುತ್ತಿರುವ ಕೆಲವು ಕಲೆಗಳನ್ನು ನೆನಪಿಸುವ ಹಾಗೂ  ಮಕ್ಕಳನ್ನುಇದರೊಂದಿಗೆ ತೊಡಗಿಸಿಕೊಂಡ ರಂಜನೀಯಕಾರ್ಯಕ್ರಮವನ್ನು ಶಾಲೆಯಲ್ಲಿ ಬೊಳಿಪು ತಂಡದ ಕಲಾವಿದರು ನಡೆಸಿಕೊಟ್ಟರು.ಶಾಲಾ ಮ್ಯಾನೇಜರ್ ಶ್ರೀ  ಕೃಷ್ಣ ಭಟ್  ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯೋಪಾದ್ಯಾಯ ಶ್ರೀಪತಿ ಭಟ್ ಹಾಗೂ ಶಂಕರ ಸ್ವಾಮಿ ಕೃಪ ಕಾರ್ಯಕ್ರಮದ ಬಗ್ಗೆ ಮನದಾಳದ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಪ್ರಾಚೀನ  ಸಂಗೀತ ವಾದ್ಯಗಳಾದ  ದುಡಿ, ಚೆಂಡೆ  ಡೋಲು, ತಮ್ಕಿ , ಗೆಜ್ಜೆಕೋಲು ,ಪರುಕೋಲು ,ಬಿದಿರಚೆಂಡೆ  ಮುಂತಾದವುಗಳನ್ನು ಪರಿಚಯಿಸಲಾಯಿತು . ಬೈರಿಹಾಡು, ಓ ಬೇಲೆ ಹಾಡು,  ಒಡ್ಡು ಕುಣಿತ,  ಹಾಗೂ ಚೆನ್ನು ಕುಣಿತದ  ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು.   ಕಾರ್ಯಕ್ರಮ ಮಕ್ಕಳ ಹಾಗೂ ಎಲ್ಲರ ಮನಸ್ಸನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

No comments:

Post a Comment