Friday 30 January 2015

ದಿನಾಂಕ 30 -01 -2015  ಶುಕ್ರವಾರ  ನಡೆದ   2014 -15  ಶಾಲಾ ವಾರ್ಷಿಕೋತ್ಸವ ದ ತುಣುಕುಗಳು
2014 -15  ನೇ ವರ್ಷದ  ಶಾಲಾ ವಾರ್ಷಿಕೋತ್ಸವವನ್ನು ದಿನಾಂಕ 30 /01 2014 ರಂದು ಆಚರಿಸಲಾಯಿತು . ಕಾಟುಕುಕ್ಕೆ  ಸಹಕಾರಿ ಬ್ಯಾಂಕಿನ  ಸೆಕ್ರೆಟರಿ ಶ್ರೀ  ಗೋಪಾಲಕೃಷ್ಣ ಶೆಟ್ಟಿ  ಇವರು ಬೆಳಗ್ಗೆ  ಧ್ವ ಜಾರೋಹಣ ಮಾಡಿ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು .ಬಳಿಕ ಮಕ್ಕಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ  ಚದ್ಮವೇಷ ಸ್ಪರ್ಧೆಗಳು ನಡೆದವು . ಸಂಜೆ 4 .30 ರಿಂದ ಗ್ರಾಮದ ಬಾಲವಾಡಿ ಚಿಣ್ಣರು ನೃತ್ಯಗಳ ಮೂಲಕ ಜನರ ಮನಸ್ಸನ್ನು ರಂಜಿಸಿ ತಾವು ಕುಣಿದು ಸಂತೋಷಪಟ್ಟರು.ಸಂಜೆಯ ಸಭೆಯ ಅಧ್ಯಕ್ಷ ಸ್ಥಾನವನ್ನು ಕುಂಬಳ  ವಿದ್ಯಾಧಿಕಾರಿ ಶ್ರೀ  ಕೈಲಾಸ ಮೂರ್ತಿ ಇವರು ವಹಿಸಿದ್ದರು.ವೇದಿಕೆಯಲ್ಲಿದ್ದ ಮುಖ್ಯ ಅತಿಥಿ   ಶ್ರೀಯುತ  ಸೋಮಶೇಖರ್  ಪಂಚಾಯತು ಅಧ್ಯಕ್ಷರು   ವಾರ್ಡ್ ಸದಸ್ಯರಾದ  ಬಿ  ಎಸ್  ಗಾಂಭೀರ, ಶ್ರೀಮತಿ ಸುಶೀಲ ಹಾಗೂ  ಅನಿತಾದೇವಿ  ಇವರು ವಾರ್ಷಿಕೋತ್ಸವ  ಆಚರಣೆಯ ಬಗ್ಗೆ ಸಂತೋಷ  ವ್ಯಕ್ತಪಡಿಸಿ  ಮಕ್ಕಳಿಗೆ ಉಜ್ವಲ  ಭವಿಷ್ಯವನ್ನು  ಹಾರೈಸಿದರು.ವೇದಿಕೆಯಲ್ಲಿ  ಕಾಸರಗೋಡು   ಡಿ.ಇ .ಓ ಶ್ರೀಯುತ  ಸದಾಶಿವ ನಾಯಕ್  ಹಾಗೂ  ರಾಜ್ಯ ಪ್ರಶಸ್ತಿ  ಪುರಸ್ಕೃತ  ಅಧ್ಯಾಪಕ  ಶ್ರೀಯುತ  ಶಂಕರ್ ಸಾರಡ್ಕ ಇವರನ್ನು ಸಂಸ್ಥೆಯ ಪರವಾಗಿ ಸಂಚಾಲಕ ಶ್ರೀ   ಕೃಷ್ಣ ಭಟ್  ಕುಂಚಿನಡ್ಕ ಹಾಗೂ  ಪಿ ಟಿ ಏ  ಅಧ್ಯಕ್ಷ  ಲೋಕನಾಥ ಶೆಟ್ಟಿ  ಇವರು  ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿದ ಮಹನೀಯರು  ಸಂಸ್ಥೆಯ  ವ್ಯವಸ್ಥೆಯ ಬಗ್ಗೆ  ಮೆಚ್ಚುಗೆಯ ಮಾತುಗಳನ್ನಾಡಿ ಇತ್ತೀಚೆಗೆ  ಅಪರೂಪವಾಗುತ್ತಿರುವ ವಾರ್ಷಿಕೋತ್ಸವದ ಆಚರಣೆಯ  ಬಗ್ಗೆ ಖೇದ ವ್ಯಕ್ತಪಡಿಸಿ ತಮ್ಮನ್ನು ಸನ್ಮಾನಿಸಿದ  ಸಂಸ್ಥೆಯ  ಬಗ್ಗೆ ಸಂತೋಷ ವ್ಯಕ್ತಪಡಿಸಿದರು .  ಬಹುಮಾನ ವಿತರಣೆಯ ಬಳಿಕ ಶಾಲಾ  ಮಕ್ಕಳು  ಹಾಗೂ ಹಿರಿಯ ವಿಧ್ಯಾರ್ಥಿಗಳಿಂದ   ನೃತ್ಯ , ನಾಟಕ ಹಾಗೂ ಯಕ್ಷಗಾನ  ಮುಂತಾದ  ಮನರಂಜನ ಕಾರ್ಯಕ್ರಮಗಳು  ನಡೆದವು . ತುಂಬಾ  ಸಂಖ್ಯೆಯಲ್ಲಿ ನೆರೆದಿದ್ದ ಹೆತ್ತವರು ತಮ್ಮ ಮಕ್ಕಳ ಪ್ರದರ್ಶನವನ್ನು  ನೋಡಿ ಸಂತೋಷ ಪಟ್ಟರು .


Thursday 29 January 2015

           

         ಯೋಗಿ ಫುಡ್  ಪ್ರಾಡಕ್ಟ್ಸ್ ಇವರು ಉದಾರವಾಗಿ ನೀಡಿದ  ಸಿಹಿತಿಂಡಿಯನ್ನು ಸ್ವೀಕರಿಸಿ ಮಕ್ಕಳಿಗೆ ಹಂಚಲಾಯಿತು

Monday 26 January 2015

ಶ್ರೀ ಕೃಷ್ಣ ಭಟ್,ಪರಗುಡ್ದೆ  ಹಾಗೂ ಅವರ ಮಗ  ಮಹೇಶ,ಪರಗುಡ್ದೆ  [ಶಾಲಾ ಹಿರಿಯ ವಿಧ್ಯಾರ್ಥಿ] ಇವರು ಶಾಲೆಗೆ ಉದಾರವಾಗಿ  ಪ್ರೊಜೆಕ್ಟರ್ ರನ್ನು ದಿನಾಂಕ  ೨೬/೦೧/೨೦೧೫ ರಂದು ಒದಗಿಸಿದರು ಇವರ ಕೊಡುಗೆಯನ್ನು ಸಂತೋಷದಿಂದ  ಸ್ವೀಕರಿಸಲಾಯಿತು. ಹಾಗೂ ದಾನಿಗಳಿಗೆ  ಸಂಸ್ಥೆಯ ಪರವಾಗಿ ತುಂಬು  ಹೃದಯದ ಕೃತಜ್ಞತೆಗಳು ..
 ಜನವರಿ  26  2015  ಪ್ರಜಾಪ್ರಭುತ್ವ  ದಿನವನ್ನು  ಶಾಲೆಯಲ್ಲಿ  ಆಚರಿಸಲಾಯಿತು . ಸಂಚಾಲಕ  ಶ್ರೀಯುತ  ಕೃಷ್ಣ ಭಟ್  ಇವರು ಧ್ವಜ  ಹಾರಿಸಿದರು . ಭಾರತದ ಸಂವಿಧಾನ ಹಾಗೂ ಅದರ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು.