Friday 11 September 2015

Friday 21 August 2015

ಶಾಲೆಯ  ನೂತನ   ಭೋಜನ  ಗೃಹದ  ಉದ್ಘಾಟನೆಯನ್ನು  ಕುಂಬಳ ಉಪಜಿಲ್ಲಾ  ವಿದ್ಯಾಧಿಕಾರಿ ಶ್ರೀಯುತ  ಕೈಲಾಸ ಮೂರ್ತಿ ಇವರು  ದಿನಾಂಕ ೨೧/೦೮.೨೦೧೫ ರಂದು ನೆರವೇರಿಸಿದರು . ಎನ್ಮಕಜೆ  ಪಂಚಾಯತ್  ವಿಧ್ಯಾಭ್ಯಾಸ  ಸಮಿತಿ ಅಧ್ಯಕ್ಷ  ಬಿ .ಎಸ್  ಗಂಭೀರ ಇವರ  ಅಧ್ಯಕ್ಷತೆಯಲ್ಲಿ
ಸಭಾ ಕಾರ್ಯಕ್ರಮ  ನಡೆಯಿತು  . ಶಾಲಾ  ಪಿ ಟಿ ಏ  ಅಧ್ಯಕ್ಷ  ಲೋಕನಾಥ ಶೆಟ್ಟಿ , ಸಂಚಾಲಕ  ಕೃಷ್ಣ ಭಟ್  ಎಂ ಪಿ ಟಿ ಏ  ಅಧ್ಯಕ್ಷೆ  ಸವಿತಾ   ಪಿ ಟಿ ಏ  ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ  ಶ್ರೀಪತಿ ಭಟ್  ಉಪಸ್ಥಿತರಿದ್ದು  ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು  ಹಾಗೂ ಜಯಪ್ರಕಾಶ್  ಧನ್ಯವಾದ ವಿತ್ತರು 

Wednesday 19 August 2015


ಶಾಲಾ PTA  ಮಹಾಸಭೆ  ದಿನಾಂಕ ೧೮/೦೮ /೨೦೧೫  ರಂದು ನಡೆಯಿತು  ಶ್ರೀಯುತ  ಲೋಕನಾಥ  ಶೆಟ್ಟಿ  ಇವರನ್ನು  ಅಧ್ಯಕ್ಷರನ್ನಾಗಿ  ಮತ್ತು  ರಾಜಾರಾಮ ಶೆಟ್ಟಿ  ಇವರನ್ನು  ಉಪಾಧ್ಯಕ್ಷರನ್ನಾಗಿ  ಮುಂದುವರಿಸಲು  ಸರ್ವಾನುಮತದಿಂದ  ತೀರ್ಮಾನಿಸ ಲಾಯಿತು , ಸಭೆಯಲ್ಲಿ ಮಕ್ಕಳಿಗೆ ಸಮವಸ್ತ್ರ  ವಿತರಣೆ ಮಾಡಲಾಯಿತು 

Saturday 15 August 2015

                      ಸ್ವಾತಂತ್ರೋತ್ಸವ - 2015 .    ವಿವಿಧ  ಕಾರ್ಯಕ್ರಮ ಗಳೊಂದಿಗೆ  ಶಾಲೆಯಲ್ಲಿ                                                                                                              ಆಚರಿಸಲಾಯಿತು 

Tuesday 11 August 2015

ಡಾ| ಕಯ್ಯಾರ ಕಿಞ್ಞಣ್ಣ ರೈ ಇವರಿಗೆ  ಅಧ್ಯಾಪಕ  ವಿದ್ಯಾರ್ಥಿ ವೃಂಧದವರು    ಶ್ರದ್ದಾಂಜಲಿ  ಸಲ್ಲಿಸಿದರು 

Monday 10 August 2015

Vigyarangam kala sahithya vedi Inauguration 2015
School vegetable garden Work 2015

Friday 19 June 2015

Inauguration and inspirational activity by Ramachandra Maniyani on Vayana Dinam2015

Monday 1 June 2015

2015 -16  ನೇ ವರ್ಷದ  ಶಾಲಾ ಪ್ರವೆಶೋತ್ಸವ ವನ್ನು  ವಿವಿಧತೆಯೊಂದಿಗೆ  ಶಾಲೆಯಲ್ಲಿ ಆಚರಿಸಲಾಯಿತು . ವಾರ್ಡ್ ಮೆಂಬರ್ ಬಿ ಎಸ್ ಗಾಂಭೀರ, ಶಾಲಾ ಮ್ಯಾನೇಜರ್  ಕೃಷ್ಣ ಭಟ್ , ಪಿ ಟಿಏ  ಅಧ್ಯಕ್ಷ  ರಾಜಾರಾಮ , ಮುಖ್ಯೋಪಾಧ್ಯಯ ಶ್ರೀಪತಿ ಭಟ್  ಇವರುಗಳು  ನಡೆದ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಗೂ  ವಿದ್ಯಾರ್ಥಿಗಳಿಗೆ  ಕಲಿಕೊಪಕರಣಗಳನ್ನು ವಿತರಿಸಲಾಯಿತು .
ನವೋಲ್ಲಾ ಸಭರಿತ ಮಕ್ಕಳು  ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು 

Saturday 21 March 2015

ನಿವೃತ್ತ  ಬಿ .ಎಸ್ .ಎಫ್ .ಯೋಧ  ಹಾಗೂ  ಶಾಲಾ ಹಿರಿಯ ವಿಧ್ಯಾರ್ಥಿ   ಶ್ರೀಯುತ  ಅಪ್ಪಯ ಮಣಿಯಾಣಿ   ಇವರೊಂದಿಗೆ ಭಾರತದ ಗಡಿ ಹಾಗೂ ರಕ್ಷಣಾ  ಪಡೆಗಳು  ವಿಷಯವಾಗಿ  ಮಕ್ಕಳಿಂದ  ಸಂವಾದ


Saturday 7 March 2015

  ಕೇರಳ  ವಿಧಾನಸಭಾ  ಸ್ಪೀಕರ್  
ಶ್ರೀ  ಕಾರ್ತಿಕೇಯನ್  
ಇವರಿಗೆ ಶ್ರದ್ಧಾoಜಲಿಗಳು.  
                  




ನಿಧನ  [07 -03 -2015 ]

Saturday 28 February 2015

National Science Day is celebrated all over India with great enthusiasm on 28th of February every year in order to commemorate the invention of the Raman Effect in India by the Indian physicist, Sir Chandrasekhara Venkata Raman on the same day in the year 1928. For his great success in the field of science in India, Chandrasekhara Venkata Raman was awarded and honored with the Nobel Prize in the Physics

Wednesday 18 February 2015

ಅಮ್ಮ ಅರಿಯಾನ್ ಕಾರ್ಯಕ್ರಮದ  ಭಾಗವಾಗಿ  ಕುಂಬ್ಳೆ  ಬಿ .ಆರ್ .ಸಿ ಯ ಶ್ರೀಮತಿ  ಕಾರ್ಮೆಲಿ ಟೀಚರ್ ಇವರು ಅಲ್ಪಸಂಖ್ಯಾಕ  ಮಕ್ಕಳ ಅಮ್ಮಂದಿರು  ತಮ್ಮ ಮಕ್ಕಳ ಏಳ್ಗೆಗಾಗಿ  ನಿರ್ವಹಿಸಬೇಕಾದ ಕರ್ತವ್ಯಗಳು  ಹಾಗೂ ಜವಾಬ್ದಾರಿಗಳ ಅರಿವನ್ನು  ತಿಳಿಸುವ  ಕಾರ್ಯಕ್ರಮವನ್ನು ದಿನಾಂಕ  18 /02 /2015 ರಂದು ಶಾಲೆಯಲ್ಲಿ   ನಡೆಸಿಕೊಟ್ಟರು 

Saturday 14 February 2015

ಶಾಲಾ  ಮಟ್ಟದ  ಮೆಟ್ರಿಕ್ ಮೇಳ/ ಗಣಿತ ಶಿಬಿರವು ಫೆಬ್ರವರಿ   13 ಹಾಗೂ 14 ರಂದು ನಡೆಯಿತು ಗಣಿತವನ್ನು ತರಗತಿಯ ಹೊರತಾದ ಸನ್ನಿವೇಶದಲ್ಲಿ ಸ್ವಯಂ  ಆಸಕ್ತಿಯಿಂದ ಕಲಿಯುವ  ಹಲವು  ವಿಧಾನಗಳನ್ನು  ಚಟುವಟಿಕಾಧಾರಿತ ಕ್ರಿಯೆಗಳ ಮೂಲಕ  ಶಿಬಿರಾರ್ಥಿಗಳು  ಕಲಿತುಕೊಂಡರು .ಗಣಿತದ ವಿವಿಧ  ನಿರ್ಮಾಣ ಚಟುವಟಿಕೆಗಳ ಮೂಲಕ  ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು

Wednesday 4 February 2015

World Cancer Day (WCD)
World Cancer Day is celebrated every year on 4th of February all over the world to commemorate all the efforts done by the WHO, United Nations, governmental and nongovernmental health organizations towards making the strategy to fight against cancer as well as distributing the real message about this epidemic disease and its treatments including its precautionary measures by uniting all the people a day on global basis. It is celebrated to plan some new strategies as well as implement some new programs which help to aware more people about this disease. This event is organized on annual basis under the supervision of Union for International Cancer Control (UICC) and other leading health organizations involved for cancer fighting.

Friday 30 January 2015

ದಿನಾಂಕ 30 -01 -2015  ಶುಕ್ರವಾರ  ನಡೆದ   2014 -15  ಶಾಲಾ ವಾರ್ಷಿಕೋತ್ಸವ ದ ತುಣುಕುಗಳು
2014 -15  ನೇ ವರ್ಷದ  ಶಾಲಾ ವಾರ್ಷಿಕೋತ್ಸವವನ್ನು ದಿನಾಂಕ 30 /01 2014 ರಂದು ಆಚರಿಸಲಾಯಿತು . ಕಾಟುಕುಕ್ಕೆ  ಸಹಕಾರಿ ಬ್ಯಾಂಕಿನ  ಸೆಕ್ರೆಟರಿ ಶ್ರೀ  ಗೋಪಾಲಕೃಷ್ಣ ಶೆಟ್ಟಿ  ಇವರು ಬೆಳಗ್ಗೆ  ಧ್ವ ಜಾರೋಹಣ ಮಾಡಿ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು .ಬಳಿಕ ಮಕ್ಕಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ  ಚದ್ಮವೇಷ ಸ್ಪರ್ಧೆಗಳು ನಡೆದವು . ಸಂಜೆ 4 .30 ರಿಂದ ಗ್ರಾಮದ ಬಾಲವಾಡಿ ಚಿಣ್ಣರು ನೃತ್ಯಗಳ ಮೂಲಕ ಜನರ ಮನಸ್ಸನ್ನು ರಂಜಿಸಿ ತಾವು ಕುಣಿದು ಸಂತೋಷಪಟ್ಟರು.ಸಂಜೆಯ ಸಭೆಯ ಅಧ್ಯಕ್ಷ ಸ್ಥಾನವನ್ನು ಕುಂಬಳ  ವಿದ್ಯಾಧಿಕಾರಿ ಶ್ರೀ  ಕೈಲಾಸ ಮೂರ್ತಿ ಇವರು ವಹಿಸಿದ್ದರು.ವೇದಿಕೆಯಲ್ಲಿದ್ದ ಮುಖ್ಯ ಅತಿಥಿ   ಶ್ರೀಯುತ  ಸೋಮಶೇಖರ್  ಪಂಚಾಯತು ಅಧ್ಯಕ್ಷರು   ವಾರ್ಡ್ ಸದಸ್ಯರಾದ  ಬಿ  ಎಸ್  ಗಾಂಭೀರ, ಶ್ರೀಮತಿ ಸುಶೀಲ ಹಾಗೂ  ಅನಿತಾದೇವಿ  ಇವರು ವಾರ್ಷಿಕೋತ್ಸವ  ಆಚರಣೆಯ ಬಗ್ಗೆ ಸಂತೋಷ  ವ್ಯಕ್ತಪಡಿಸಿ  ಮಕ್ಕಳಿಗೆ ಉಜ್ವಲ  ಭವಿಷ್ಯವನ್ನು  ಹಾರೈಸಿದರು.ವೇದಿಕೆಯಲ್ಲಿ  ಕಾಸರಗೋಡು   ಡಿ.ಇ .ಓ ಶ್ರೀಯುತ  ಸದಾಶಿವ ನಾಯಕ್  ಹಾಗೂ  ರಾಜ್ಯ ಪ್ರಶಸ್ತಿ  ಪುರಸ್ಕೃತ  ಅಧ್ಯಾಪಕ  ಶ್ರೀಯುತ  ಶಂಕರ್ ಸಾರಡ್ಕ ಇವರನ್ನು ಸಂಸ್ಥೆಯ ಪರವಾಗಿ ಸಂಚಾಲಕ ಶ್ರೀ   ಕೃಷ್ಣ ಭಟ್  ಕುಂಚಿನಡ್ಕ ಹಾಗೂ  ಪಿ ಟಿ ಏ  ಅಧ್ಯಕ್ಷ  ಲೋಕನಾಥ ಶೆಟ್ಟಿ  ಇವರು  ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿದ ಮಹನೀಯರು  ಸಂಸ್ಥೆಯ  ವ್ಯವಸ್ಥೆಯ ಬಗ್ಗೆ  ಮೆಚ್ಚುಗೆಯ ಮಾತುಗಳನ್ನಾಡಿ ಇತ್ತೀಚೆಗೆ  ಅಪರೂಪವಾಗುತ್ತಿರುವ ವಾರ್ಷಿಕೋತ್ಸವದ ಆಚರಣೆಯ  ಬಗ್ಗೆ ಖೇದ ವ್ಯಕ್ತಪಡಿಸಿ ತಮ್ಮನ್ನು ಸನ್ಮಾನಿಸಿದ  ಸಂಸ್ಥೆಯ  ಬಗ್ಗೆ ಸಂತೋಷ ವ್ಯಕ್ತಪಡಿಸಿದರು .  ಬಹುಮಾನ ವಿತರಣೆಯ ಬಳಿಕ ಶಾಲಾ  ಮಕ್ಕಳು  ಹಾಗೂ ಹಿರಿಯ ವಿಧ್ಯಾರ್ಥಿಗಳಿಂದ   ನೃತ್ಯ , ನಾಟಕ ಹಾಗೂ ಯಕ್ಷಗಾನ  ಮುಂತಾದ  ಮನರಂಜನ ಕಾರ್ಯಕ್ರಮಗಳು  ನಡೆದವು . ತುಂಬಾ  ಸಂಖ್ಯೆಯಲ್ಲಿ ನೆರೆದಿದ್ದ ಹೆತ್ತವರು ತಮ್ಮ ಮಕ್ಕಳ ಪ್ರದರ್ಶನವನ್ನು  ನೋಡಿ ಸಂತೋಷ ಪಟ್ಟರು .


Thursday 29 January 2015

           

         ಯೋಗಿ ಫುಡ್  ಪ್ರಾಡಕ್ಟ್ಸ್ ಇವರು ಉದಾರವಾಗಿ ನೀಡಿದ  ಸಿಹಿತಿಂಡಿಯನ್ನು ಸ್ವೀಕರಿಸಿ ಮಕ್ಕಳಿಗೆ ಹಂಚಲಾಯಿತು

Monday 26 January 2015

ಶ್ರೀ ಕೃಷ್ಣ ಭಟ್,ಪರಗುಡ್ದೆ  ಹಾಗೂ ಅವರ ಮಗ  ಮಹೇಶ,ಪರಗುಡ್ದೆ  [ಶಾಲಾ ಹಿರಿಯ ವಿಧ್ಯಾರ್ಥಿ] ಇವರು ಶಾಲೆಗೆ ಉದಾರವಾಗಿ  ಪ್ರೊಜೆಕ್ಟರ್ ರನ್ನು ದಿನಾಂಕ  ೨೬/೦೧/೨೦೧೫ ರಂದು ಒದಗಿಸಿದರು ಇವರ ಕೊಡುಗೆಯನ್ನು ಸಂತೋಷದಿಂದ  ಸ್ವೀಕರಿಸಲಾಯಿತು. ಹಾಗೂ ದಾನಿಗಳಿಗೆ  ಸಂಸ್ಥೆಯ ಪರವಾಗಿ ತುಂಬು  ಹೃದಯದ ಕೃತಜ್ಞತೆಗಳು ..
 ಜನವರಿ  26  2015  ಪ್ರಜಾಪ್ರಭುತ್ವ  ದಿನವನ್ನು  ಶಾಲೆಯಲ್ಲಿ  ಆಚರಿಸಲಾಯಿತು . ಸಂಚಾಲಕ  ಶ್ರೀಯುತ  ಕೃಷ್ಣ ಭಟ್  ಇವರು ಧ್ವಜ  ಹಾರಿಸಿದರು . ಭಾರತದ ಸಂವಿಧಾನ ಹಾಗೂ ಅದರ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು.