Tuesday 23 December 2014

ಭಾರತವು  ಹಳ್ಳಿಗಳ ದೇಶ .ಅಧಿಕಾಂಶ ಜನರ ಬದುಕಿನಧಾರ ಕೃಷಿ .75 % ಜನರು ಕೃಷಿಯನ್ನೇ  ನಂಬಿ ಬದುಕುವ ಕಾಲವಿತ್ತು .ಬದಲಾದ  ಸನ್ನಿವೇಶದಲ್ಲಿ ಕೈಗಾರಿಕೆ ಗಳತ್ತ ಆಕರ್ಷಿತ ರಾದ ಜನರು  ಕೃಷಿಯಲ್ಲಿ ನಿರಾಸಕ್ತಿ ವಹಿಸಿರುವುದು ಇಂದಿನ ಸತ್ಯ . ಆದರೂ ಹಸಿರುಕ್ರಾಂತಿಯ ಪರಿಣಾಮದಿಂದ ಕೃಷಿ ಉತ್ಪನ್ನಗಳಲ್ಲಿ  ಸ್ವಾವಲಂಬನೆ ಯನ್ನು ಸಾದಿಸಿರುವುದು ನಮ್ಮ ಹೆಗ್ಗಳಿಕೆ .
          ಕೃಷಿಕರು ನಮ್ಮ ದೇಶದ ಬೆನ್ನೆಲುಬು .ದಿವಂಗತ  ಪ್ರಧಾನಿ ಚೌಧರಿ  ಚರಣ್ ಸಿಂಗ್ ರ  ಜನ್ಮದಿನ  ಡಿಸೆಂಬರ್ 23  ನ್ನು ದೇಶದಾದ್ಯಂತ  ಕಿಸಾನ್ ದಿವಸ್ ಅಥವಾ  ಫಾರ್ಮರ್ಸ್ ಡೇ  ಎಂದು ಆಚರಿಸಲಾಗುತ್ತದೆ . ಉತ್ತರಪ್ರದೇಶದ  ಕೃಷಿ ಕುಟುಂಬ ದಲ್ಲಿ ಜನ್ಮತಾಳಿ ಅತ್ಯಂತ ಸರಳಜೀವನವನ್ನು ನಡೆಸಿದ ಚರಣಸಿಂಘ ರದು ಆದರ್ಶ ಬದುಕು . ಈ ದೇಶದ ಮಣ್ಣಿನ ಮಗನಾಗಿ ರೈತರ ಸಮಸ್ಯೆಗಳನ್ನು  ಆಲಿಸಿ,  ಅವರ ಜೀವನವನ್ನು ಉತ್ತಮಪಡಿಸುವುದಕ್ಕೆ ಪ್ರಯತ್ನಿಸಿದ  ಮಾಜಿ ಪ್ರಧಾನಿಗೆ  ನಮನಗಳು.  ಹಾಗೂ ಕೃಷಿಕರ ಜೀವನ ಉತ್ತಮವಾಗಲಿ  ದೇಶವು ಸಮೃದ್ಧಿ ಯತ್ತ ಸಾಗಲಿ ಎಂಬುದೇ ಈ ದಿನದ  ಹಾರೈಕೆ .     

No comments:

Post a Comment