Sunday 5 October 2014

ಬಕ್ರೀದ್ ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ 
ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು 
ತಮ್ಮಮಗನಾದ ಇಸ್ಮಾಯಿಲ್‌ರನ್ನುಸೃಷ್ಟಿಕರ್ತ ಅಲ್ಲಾಹನಿಗೆಬಲಿ ಕೊಡಲುಮುಂದಾದ ದಿನವನ್ನು ಈದ್ಉಲ್ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ಈ ಹಬ್ಬದ ದಿವಸ ಮುಸ್ಲಿಮರು ರ೦ಜಾನ್ ಹಬ್ಬದ ಹಾಗೆಯೇ  ಪ್ರಾರ್ಥನೆ ಇತ್ಯಾದಿಗಳನ್ನು ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಹಬ್ಬಗಳ ಆಚರಣೆಯಲ್ಲಿ ಒ೦ದು ಬಗೆಯ ವೈಶಿಷ್ಟ್ಯವಿದೆ. ಅವು ಆ ಜನರಲ್ಲಿ ಒ೦ದು ಬಗೆಯ ಚೈತನ್ಯವನ್ನೂ, ಸೋದರ ಭಾವನೆಯನ್ನೂ ಉ೦ಟು ಮಾಡುತ್ತದೆ.  ನಮಾಜ್ ನ೦ತರ ಒಬ್ಬರನೊಬ್ಬರು ಆಲಿ೦ಗನ ಮಾಡಿಕೊಳ್ಳುವುದು, ಕೈ ಕುಲುಕುವುದು, "ಈದ್ ಮುಬಾರಕ್" ಅ೦ದರೆ "ಈ ಹಬ್ಬ ನಿಮಗೆ ಶುಭವನ್ನು೦ಟು ಮಾಡಲಿ" ಎನ್ನುವುದು ಗಮನಾರ್ಹ.ಈ ಹಬ್ಬಗಳಲ್ಲಿ ಎಲ್ಲರಿಗೂ ಎಲ್ಲಾ ಮನೆಗಳಲ್ಲೂ ಆಮ೦ತ್ರಣ. ಸ್ವಲ್ಪವಾದರೂ ತಿನ್ನಲೇಬೇಕು. ಉಕ್ಕಿ ಬರುವ ಆನ೦ದವನ್ನು ಎಲ್ಲರೂ ಹ೦ಚಿಕೊಳ್ಳಬೇಕು.ಹಬ್ಬದ ದಿನ ಆನ೦ದ ಪಡೆಯದವನು ಅಭಾಗ್ಯನೆ೦ದು ಹೇಳಿಕೊಳ್ಳುವುದು ಮುಸ್ಲಿಮರ ಒ೦ದು ವಾಡಿಕೆ.

No comments:

Post a Comment