Tuesday 23 December 2014

ಭಾರತವು  ಹಳ್ಳಿಗಳ ದೇಶ .ಅಧಿಕಾಂಶ ಜನರ ಬದುಕಿನಧಾರ ಕೃಷಿ .75 % ಜನರು ಕೃಷಿಯನ್ನೇ  ನಂಬಿ ಬದುಕುವ ಕಾಲವಿತ್ತು .ಬದಲಾದ  ಸನ್ನಿವೇಶದಲ್ಲಿ ಕೈಗಾರಿಕೆ ಗಳತ್ತ ಆಕರ್ಷಿತ ರಾದ ಜನರು  ಕೃಷಿಯಲ್ಲಿ ನಿರಾಸಕ್ತಿ ವಹಿಸಿರುವುದು ಇಂದಿನ ಸತ್ಯ . ಆದರೂ ಹಸಿರುಕ್ರಾಂತಿಯ ಪರಿಣಾಮದಿಂದ ಕೃಷಿ ಉತ್ಪನ್ನಗಳಲ್ಲಿ  ಸ್ವಾವಲಂಬನೆ ಯನ್ನು ಸಾದಿಸಿರುವುದು ನಮ್ಮ ಹೆಗ್ಗಳಿಕೆ .
          ಕೃಷಿಕರು ನಮ್ಮ ದೇಶದ ಬೆನ್ನೆಲುಬು .ದಿವಂಗತ  ಪ್ರಧಾನಿ ಚೌಧರಿ  ಚರಣ್ ಸಿಂಗ್ ರ  ಜನ್ಮದಿನ  ಡಿಸೆಂಬರ್ 23  ನ್ನು ದೇಶದಾದ್ಯಂತ  ಕಿಸಾನ್ ದಿವಸ್ ಅಥವಾ  ಫಾರ್ಮರ್ಸ್ ಡೇ  ಎಂದು ಆಚರಿಸಲಾಗುತ್ತದೆ . ಉತ್ತರಪ್ರದೇಶದ  ಕೃಷಿ ಕುಟುಂಬ ದಲ್ಲಿ ಜನ್ಮತಾಳಿ ಅತ್ಯಂತ ಸರಳಜೀವನವನ್ನು ನಡೆಸಿದ ಚರಣಸಿಂಘ ರದು ಆದರ್ಶ ಬದುಕು . ಈ ದೇಶದ ಮಣ್ಣಿನ ಮಗನಾಗಿ ರೈತರ ಸಮಸ್ಯೆಗಳನ್ನು  ಆಲಿಸಿ,  ಅವರ ಜೀವನವನ್ನು ಉತ್ತಮಪಡಿಸುವುದಕ್ಕೆ ಪ್ರಯತ್ನಿಸಿದ  ಮಾಜಿ ಪ್ರಧಾನಿಗೆ  ನಮನಗಳು.  ಹಾಗೂ ಕೃಷಿಕರ ಜೀವನ ಉತ್ತಮವಾಗಲಿ  ದೇಶವು ಸಮೃದ್ಧಿ ಯತ್ತ ಸಾಗಲಿ ಎಂಬುದೇ ಈ ದಿನದ  ಹಾರೈಕೆ .     

Monday 22 December 2014

               NATIONAL MATHEMATICS DAY. December-22

Srinivasa Ramanujan Iyengar, Born on December 22 1887was an indian mathematician. He is considered to be one of the most talented mathematicians in recent history. He had no formal training in mathematics. However, he still made large contributions to number theory.
 After getting his degree at Cambridge, Ramanujan did his own work. He compiled over 3500 identities and equations in his life. Some of the identities were found in his "lost notebook". When the notebook was discovered, mathematicians proved almost all of Ramanujan's work. His discoveries have led to many advancements in mathematics. His formulas are now being used in crystallography and string theroyIn 2011, Ramanujan's birthday was diclaired as"National Mathematics Day" on December by Prime Minister Manmohan Singh

Saturday 20 December 2014

ಶಾಲೆಯಲ್ಲಿ ಮಕ್ಕಳಿಗಾಗಿ ಯಕ್ಷಗಾನ ನೃತ್ಯತರಬೇತಿ ತರಗತಿಗಳನ್ನು ನಾಟ್ಯಗುರು ಶ್ರೀ  ಬಾಲಕೃಷ್ಣ ಪೂಜಾರಿ, ಉದ್ದಂಗಳ. ಇವರ ನೇತ್ರತ್ವದಲ್ಲಿ 
ದಿನಾಂಕ 20 -12 -2014 ರಂದು  ಆರಂಭಿಸಲಾಯಿತು   

Wednesday 10 December 2014

Human Rights Day is celebrated every year on Dec. 10 to commemorate the Universal Declaration of Human Rights and ensure its continued remembrance as a common standard for all nations

Saturday 6 December 2014

                                      ಬೊಳಿಪು ಜಾನಪದ  ಕಲಾತಂಡ ಇವರಿಂದ  ಕಾರ್ಯಕ್ರಮ
ನೆರೆದವರ ಮನಸ್ಸನ್ನು  ಶತಮಾನಗಳ ಹಿಂದೆ ಕೊಂಡೊಯ್ದು,ಮರೆಯಾಗುತ್ತಿರುವ ಜನಪದ ಕಲೆಯ ವಿವಿಧ ಪ್ರಾಕಾರಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವುದೇ 'ಬೊಳಿಪು ' ಕಲಾತಂಡ ಮಾಡುತ್ತಿರುವ ಉತ್ತಮ ಕಲಾ ಸೇವೆ   ಎಂಬುದರಲ್ಲಿ ಸಂಶಯವಿಲ್ಲ. 
   ತಂಡದ ಮುಖ್ಯಸ್ಥ  ಶ್ರೀ ಶಂಕರ ಸ್ವಾಮಿ ಕೃಪ ಹಾಗೂ ಸದಸ್ಯರಾದ, ಯಶೋದ,ಅಶೋಕ,ಯಜ್ಞೇಶ್, ಯಜ್ನುಶ,ಸಂಧ್ಯಾ, ಶರಣ್ಯ,ಗೀತ ಸುಶೀಲ,ಶ್ವೇತ ಹಾಗೂ ಪ್ರಧಾನ ಕಲಾವಿದ ಮತ್ತು ಪತ್ರಕರ್ತ ಶ್ರೀ ಜಯ ಮಣಿಯoಪಾರೆ ಇವರ ಕಲಾ ಸೇವೆ ಅಭಿನಂದನಾರ್ಹ.
   ದಿನಾಂಕ  06-12-2014  ಶನಿವಾರ ಶಾಲೆಯಲ್ಲಿ ಮರೆಯಾಗುತ್ತಿರುವ ಕೆಲವು ಕಲೆಗಳನ್ನು ನೆನಪಿಸುವ ಹಾಗೂ  ಮಕ್ಕಳನ್ನುಇದರೊಂದಿಗೆ ತೊಡಗಿಸಿಕೊಂಡ ರಂಜನೀಯಕಾರ್ಯಕ್ರಮವನ್ನು ಶಾಲೆಯಲ್ಲಿ ಬೊಳಿಪು ತಂಡದ ಕಲಾವಿದರು ನಡೆಸಿಕೊಟ್ಟರು.ಶಾಲಾ ಮ್ಯಾನೇಜರ್ ಶ್ರೀ  ಕೃಷ್ಣ ಭಟ್  ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯೋಪಾದ್ಯಾಯ ಶ್ರೀಪತಿ ಭಟ್ ಹಾಗೂ ಶಂಕರ ಸ್ವಾಮಿ ಕೃಪ ಕಾರ್ಯಕ್ರಮದ ಬಗ್ಗೆ ಮನದಾಳದ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಪ್ರಾಚೀನ  ಸಂಗೀತ ವಾದ್ಯಗಳಾದ  ದುಡಿ, ಚೆಂಡೆ  ಡೋಲು, ತಮ್ಕಿ , ಗೆಜ್ಜೆಕೋಲು ,ಪರುಕೋಲು ,ಬಿದಿರಚೆಂಡೆ  ಮುಂತಾದವುಗಳನ್ನು ಪರಿಚಯಿಸಲಾಯಿತು . ಬೈರಿಹಾಡು, ಓ ಬೇಲೆ ಹಾಡು,  ಒಡ್ಡು ಕುಣಿತ,  ಹಾಗೂ ಚೆನ್ನು ಕುಣಿತದ  ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು.   ಕಾರ್ಯಕ್ರಮ ಮಕ್ಕಳ ಹಾಗೂ ಎಲ್ಲರ ಮನಸ್ಸನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

Wednesday 3 December 2014

ವಿಶ್ವ ವಿಕಲಾಂಗ ದಿನ -2014  ರ  ಅಂಗವಾಗಿ  ಮಕ್ಕಳಲ್ಲಿ ತಿಳುವಳಿಕೆ ಯನ್ನು ಮೂಡಿಸುವ  ಉದ್ದೇಶದಿಂದ  ದಿನದ ಮಹತ್ವವನ್ನು  ತಿಳಿಸುವುದರೊಂದಿಗೆ  ಶಿಕ್ಷಕರು ಹಾಗೂ ವಿದ್ಯಾರ್ಥಿಗಳು  ವಿವಿಧ ತಂಡಗಳಲ್ಲಿ  ಅಂಗವೈಕಲ್ಯಗಳನ್ನು ಹೊಂದಿದ ಮಕ್ಕಳ  ಮನೆಗೆ ಸೌಹಾರ್ಧ ಭೇಟಿಯಿತ್ತು, ಮಗು ಹಾಗೂ ಹೆತ್ತವರೊಂದಿಗೆ  ವಿಶೇಷ ಮಾತುಕತೆ ನಡೆಸಿದರು,ಅವರ  ಸ್ಥಿತಿ ಗತಿಗಳನ್ನು ತಿಳಿಯುವುದರೊಂದಿಗೆ  ಸಿಹಿ ಕಹಿಗಳನ್ನು ಹಂಚಿಕೊಂಡು  ಸಮಾಧಾನದ ಮಾತುಗನ್ನಾಡಿದರು.
  
School team with Harshitha & Shrikanth  the disable children


Monday 1 December 2014


ವಿಶ್ವಏಡ್ಸ್' ದಿನದ ಅಂಗವಾಗಿ ಶಾಲಾ ಅಸೆಂಬ್ಲಿಯಲ್ಲಿ ಏಡ್ಸ್  ರೋಗ ಹಾಗೂ  ಅದು  ಉಂಟು ಮಾಡುವ ಘೋರ ಪರಿಣಾಮಗಳ ಬಗ್ಗೆ ತಿಳಿಸಲಾಯಿತು .ಆನಂತರ  ರೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತರಗತಿಗಳಲ್ಲಿ   ಪೋಸ್ಟರ್ ಗಳನ್ನು   ರಚಿಸಲಾಯಿತು.
Add caption