welcome
FLASH
Friday, 2 October 2015
Friday, 21 August 2015
ಶಾಲೆಯ ನೂತನ ಭೋಜನ ಗೃಹದ ಉದ್ಘಾಟನೆಯನ್ನು ಕುಂಬಳ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಯುತ ಕೈಲಾಸ ಮೂರ್ತಿ ಇವರು ದಿನಾಂಕ ೨೧/೦೮.೨೦೧೫ ರಂದು ನೆರವೇರಿಸಿದರು . ಎನ್ಮಕಜೆ ಪಂಚಾಯತ್ ವಿಧ್ಯಾಭ್ಯಾಸ ಸಮಿತಿ ಅಧ್ಯಕ್ಷ ಬಿ .ಎಸ್ ಗಂಭೀರ ಇವರ ಅಧ್ಯಕ್ಷತೆಯಲ್ಲಿ
ಸಭಾ ಕಾರ್ಯಕ್ರಮ ನಡೆಯಿತು . ಶಾಲಾ ಪಿ ಟಿ ಏ ಅಧ್ಯಕ್ಷ ಲೋಕನಾಥ ಶೆಟ್ಟಿ , ಸಂಚಾಲಕ ಕೃಷ್ಣ ಭಟ್ ಎಂ ಪಿ ಟಿ ಏ ಅಧ್ಯಕ್ಷೆ ಸವಿತಾ ಪಿ ಟಿ ಏ ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ ಶ್ರೀಪತಿ ಭಟ್ ಉಪಸ್ಥಿತರಿದ್ದು ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಜಯಪ್ರಕಾಶ್ ಧನ್ಯವಾದ ವಿತ್ತರು
ಸಭಾ ಕಾರ್ಯಕ್ರಮ ನಡೆಯಿತು . ಶಾಲಾ ಪಿ ಟಿ ಏ ಅಧ್ಯಕ್ಷ ಲೋಕನಾಥ ಶೆಟ್ಟಿ , ಸಂಚಾಲಕ ಕೃಷ್ಣ ಭಟ್ ಎಂ ಪಿ ಟಿ ಏ ಅಧ್ಯಕ್ಷೆ ಸವಿತಾ ಪಿ ಟಿ ಏ ಉಪಾಧ್ಯಕ್ಷ ರಾಜಾರಾಮ ಶಾಲಾ ಮುಖ್ಯೋ ಪಾಧ್ಯಾಯ ಶ್ರೀಪತಿ ಭಟ್ ಉಪಸ್ಥಿತರಿದ್ದು ಶುಭಾಶಂಸನೆ ಮಾಡಿದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಜಯಪ್ರಕಾಶ್ ಧನ್ಯವಾದ ವಿತ್ತರು
Monday, 1 June 2015
2015 -16 ನೇ ವರ್ಷದ ಶಾಲಾ ಪ್ರವೆಶೋತ್ಸವ ವನ್ನು ವಿವಿಧತೆಯೊಂದಿಗೆ ಶಾಲೆಯಲ್ಲಿ ಆಚರಿಸಲಾಯಿತು . ವಾರ್ಡ್ ಮೆಂಬರ್ ಬಿ ಎಸ್ ಗಾಂಭೀರ, ಶಾಲಾ ಮ್ಯಾನೇಜರ್ ಕೃಷ್ಣ ಭಟ್ , ಪಿ ಟಿಏ ಅಧ್ಯಕ್ಷ ರಾಜಾರಾಮ , ಮುಖ್ಯೋಪಾಧ್ಯಯ ಶ್ರೀಪತಿ ಭಟ್ ಇವರುಗಳು ನಡೆದ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಗೂ ವಿದ್ಯಾರ್ಥಿಗಳಿಗೆ ಕಲಿಕೊಪಕರಣಗಳನ್ನು ವಿತರಿಸಲಾಯಿತು .
ನವೋಲ್ಲಾ ಸಭರಿತ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು
ನವೋಲ್ಲಾ ಸಭರಿತ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು ಹಾಗೂ ಪಾಯಸದ ಸವಿಯನ್ನು ಉಂಡರು
Saturday, 28 February 2015

Saturday, 14 February 2015
ಶಾಲಾ ಮಟ್ಟದ ಮೆಟ್ರಿಕ್ ಮೇಳ/ ಗಣಿತ ಶಿಬಿರವು ಫೆಬ್ರವರಿ 13 ಹಾಗೂ 14 ರಂದು ನಡೆಯಿತು ಗಣಿತವನ್ನು ತರಗತಿಯ ಹೊರತಾದ ಸನ್ನಿವೇಶದಲ್ಲಿ ಸ್ವಯಂ ಆಸಕ್ತಿಯಿಂದ ಕಲಿಯುವ ಹಲವು ವಿಧಾನಗಳನ್ನು ಚಟುವಟಿಕಾಧಾರಿತ ಕ್ರಿಯೆಗಳ ಮೂಲಕ ಶಿಬಿರಾರ್ಥಿಗಳು ಕಲಿತುಕೊಂಡರು .ಗಣಿತದ ವಿವಿಧ ನಿರ್ಮಾಣ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು
Wednesday, 4 February 2015
World Cancer Day (WCD)
.jpg)
Friday, 30 January 2015
ದಿನಾಂಕ 30 -01 -2015 ಶುಕ್ರವಾರ ನಡೆದ 2014 -15 ಶಾಲಾ ವಾರ್ಷಿಕೋತ್ಸವ ದ ತುಣುಕುಗಳು
2014 -15 ನೇ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ದಿನಾಂಕ 30 /01 2014 ರಂದು ಆಚರಿಸಲಾಯಿತು . ಕಾಟುಕುಕ್ಕೆ ಸಹಕಾರಿ ಬ್ಯಾಂಕಿನ ಸೆಕ್ರೆಟರಿ ಶ್ರೀ ಗೋಪಾಲಕೃಷ್ಣ ಶೆಟ್ಟಿ ಇವರು ಬೆಳಗ್ಗೆ ಧ್ವ ಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಬಳಿಕ ಮಕ್ಕಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಚದ್ಮವೇಷ ಸ್ಪರ್ಧೆಗಳು ನಡೆದವು . ಸಂಜೆ 4 .30 ರಿಂದ ಗ್ರಾಮದ ಬಾಲವಾಡಿ ಚಿಣ್ಣರು ನೃತ್ಯಗಳ ಮೂಲಕ ಜನರ ಮನಸ್ಸನ್ನು ರಂಜಿಸಿ ತಾವು ಕುಣಿದು ಸಂತೋಷಪಟ್ಟರು.ಸಂಜೆಯ ಸಭೆಯ ಅಧ್ಯಕ್ಷ ಸ್ಥಾನವನ್ನು ಕುಂಬಳ ವಿದ್ಯಾಧಿಕಾರಿ ಶ್ರೀ ಕೈಲಾಸ ಮೂರ್ತಿ ಇವರು ವಹಿಸಿದ್ದರು.ವೇದಿಕೆಯಲ್ಲಿದ್ದ ಮುಖ್ಯ ಅತಿಥಿ ಶ್ರೀಯುತ ಸೋಮಶೇಖರ್ ಪಂಚಾಯತು ಅಧ್ಯಕ್ಷರು ವಾರ್ಡ್ ಸದಸ್ಯರಾದ ಬಿ ಎಸ್ ಗಾಂಭೀರ, ಶ್ರೀಮತಿ ಸುಶೀಲ ಹಾಗೂ ಅನಿತಾದೇವಿ ಇವರು ವಾರ್ಷಿಕೋತ್ಸವ ಆಚರಣೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.ವೇದಿಕೆಯಲ್ಲಿ ಕಾಸರಗೋಡು ಡಿ.ಇ .ಓ ಶ್ರೀಯುತ ಸದಾಶಿವ ನಾಯಕ್ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಶ್ರೀಯುತ ಶಂಕರ್ ಸಾರಡ್ಕ ಇವರನ್ನು ಸಂಸ್ಥೆಯ ಪರವಾಗಿ ಸಂಚಾಲಕ ಶ್ರೀ ಕೃಷ್ಣ ಭಟ್ ಕುಂಚಿನಡ್ಕ ಹಾಗೂ ಪಿ ಟಿ ಏ ಅಧ್ಯಕ್ಷ ಲೋಕನಾಥ ಶೆಟ್ಟಿ ಇವರು ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿದ ಮಹನೀಯರು ಸಂಸ್ಥೆಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಇತ್ತೀಚೆಗೆ ಅಪರೂಪವಾಗುತ್ತಿರುವ ವಾರ್ಷಿಕೋತ್ಸವದ ಆಚರಣೆಯ ಬಗ್ಗೆ ಖೇದ ವ್ಯಕ್ತಪಡಿಸಿ ತಮ್ಮನ್ನು ಸನ್ಮಾನಿಸಿದ ಸಂಸ್ಥೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು . ಬಹುಮಾನ ವಿತರಣೆಯ ಬಳಿಕ ಶಾಲಾ ಮಕ್ಕಳು ಹಾಗೂ ಹಿರಿಯ ವಿಧ್ಯಾರ್ಥಿಗಳಿಂದ ನೃತ್ಯ , ನಾಟಕ ಹಾಗೂ ಯಕ್ಷಗಾನ ಮುಂತಾದ ಮನರಂಜನ ಕಾರ್ಯಕ್ರಮಗಳು ನಡೆದವು . ತುಂಬಾ ಸಂಖ್ಯೆಯಲ್ಲಿ ನೆರೆದಿದ್ದ ಹೆತ್ತವರು ತಮ್ಮ ಮಕ್ಕಳ ಪ್ರದರ್ಶನವನ್ನು ನೋಡಿ ಸಂತೋಷ ಪಟ್ಟರು .

Wednesday, 28 January 2015
Wednesday, 14 January 2015
Subscribe to:
Posts (Atom)