Sunday 28 September 2014



BHAGATH SING
  Born on 28 September 1907

ಭಗತ್ ಸಿಂಗ್(೧೯೦೭೧೯೩೧ಭಗತ್ ಸಿಂಗ್ ಅವರು ಸೆಪ್ಟೆಂಬರ್ ೨೭, ೧೯೦೭ರಲ್ಲಿ ಪಂಜಾಬ್ ಲಾಯಲ್ ಪುರ ಜಿಲ್ಲೆಯ ಬಾಂಗಾ ಎಂಬ ಹಳ್ಳಿಯ ಸಿಖ್ ಸಮುದಾಯದ ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಜನಿಸಿದರು. ಜಲಿಯನ್ ವಾಲಾ ಬಾಗ್ ದುರಂತದಿಂದ ಪ್ರಭಾವಿತರಾದ ಇವರು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು. ಮಾರ್ಚ್ ೨೩ ೧೯೩೧ ರಂದು ಇವರನ್ನು ಬ್ರಿಟಿಷ್ ಸರ್ಕಾರವು ಗಲ್ಲಿಗೇರಿಸಿತು. . ಭಗತ್ ಸಿಂಗ್ ಸಂಪೂರ್ಣ ನಾಸ್ತಿಕ ಮತ್ತು ಜಾತಿವಿರೋಧಿಯಾಗಿದ್ದರು ಪ್ರಪಂಚದ ಯಾವುದೇ ರಾಷ್ಟ್ರದ ಇತಹಾಸದ ಪುಟಗಳನ್ನು ತಿರುವಿಹಾಕಿದರೂ  ಭಗತ್ ಸಿಂಗ್ ರಷ್ಟು ಚಿಕ್ಕ ವಯಸ್ಸಿನಲ್ಲೇ ಮಾನವ ಇತಿಹಾಸದಲ್ಲಿ ಅಚ್ಚಳಿಯದ ಛಾಪೊತ್ತಿರುವ ಅಪ್ರತಿಮ ಸಾಹಸಿಗರು ಕಾಣಸಿಗುವುದಿಲ್ಲ. ಧುಮ್ಮಿಕ್ಕುವ ಜಲಪಾತದಂತಹ ಹುಮ್ಮಸ್ಸು, ಎದೆ ಝಲ್ಲೆನ್ನಿಸುವ ಧೈರ್ಯ, ಎಂಥಹವರನ್ನೂ ವಿದ್ಯುತ್-ಸಂಚಲನಕ್ಕೀಡು ಮಾಡುವಂಥಹ ವ್ಯಕ್ತಿತ್ವ, ಮತ್ತು ಬದುಕಿದ್ದಷ್ಟು ದಿನವೂ ಹುಲಿಯಂತೆ ಮುನ್ನುಗ್ಗುತ್ತಿದ್ದ ಭಗತ್, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಸೃಷ್ಟಿಸಿದ್ದಾರೆ. ಯುವ ಜನರ ಸ್ಫೂರ್ತಿ ಮತ್ತು ಕೆಚ್ಚೆದೆಯ ಪ್ರತೀಕದಂತಿದ್ದ ಅವರ ಜನಪ್ರಿಯತೆಯು ಕೋಟ್ಯಾಂತರ ಯುವಜನರ ಎಚ್ಚರಿಕೆ ಘಂಟೆಯ ಪ್ರತಿಧ್ವನಿಗಳಾಗಿ ಮಾರ್ಪಟ್ಟು ಬ್ರಿಟೀಷರ ಪಾಲಿಗೆ ಆಗಂತುಕನಂತೆ ಅಪ್ಪಳಿಸಿತೆಂದರೆ ಉತ್ಟ್ರೇಕ್ಷೆಯೆಂದೇನೂ ಅನಿಸದು. ಅವರು ಭಾರತೀಯ ಯುವಜನತೆಯ ವೀರೋಚಿತ ಹೋರಾಟಗಳು ಮತ್ತು ಸಾಹಸ ಶೌರ್ಯಗಳ ಮತ್ತೊಂದು ಮುಖವೆತ್ತಂತಿದ್ದರು.

No comments:

Post a Comment